Swara Suggi (2023-24)

            To induce inner talent to extract the melodious voice from the land of Karnataka will take place with this magnificent platform. Through this prestigious program we lay red carpet for the breathing talents irrespective of their age, grade, qualification, gender and inter borders. Selected precise voices will be marked for felicitation along with award and rewards from our institution. Continuing that, winners and awardees can grab their opportunities as play back singers in silver screen ventures and also film productions from our institute.

Karnataka Swara Suggi (2023-24)

ಕರ್ನಾಟಕ ಸ್ವರ ಸುಗ್ಗಿ 2023. ಕನ್ನಡಿಗರ ಗಾನಾಭಿಷೇಕ

"ಸಂಗೀತಕ್ಕೆ ಕರುಣಿ ಇಲ್ಲ, ಅದು ಬೇಡುವುದು ಸಾದನೆಯನ್ನು ಮಾತ್ರ"
ಹಾಡುವುದು ಪ್ರತಿಯೊಬ್ಬರ ಖಯಾಲಿ, ಹಾಡಲು ಬರದವರು ಗುನುಗುತ್ತ-ತಲೆದೂಗುತ್ತಾ ತಮ್ಮ ಸಂಗೀತ ಪ್ರೇಮವನ್ನು ವ್ಯಕ್ತಪಡಿಸುತ್ತಾರೆ.
ಸಂಗೀತ ಸರಸ್ವತಿಯನ್ನು ಒಲೈಸಿಕೊಳ್ಳಲು ತಮ್ಮ ಜೀವನವನ್ನೆ ಮುಡಿಪಾಗಿಟ್ಟವರು ಬಹುಳಷ್ಟು ಜನ. ಸತತ ಪ್ರಯತ್ನದಿಂದ ಸಂಗೀತ ಹಾಗೂ ಗಾಯನದಲ್ಲಿ ಒಂದು ನವಿರಾದ ಲಯ ಕಂಡುಕೊಂಡವರಿಗೆ ವೇದಿಕೆಗಳ ಅಭಾವದಿಂದಲೋ ಅಥವಾ ಸಲ್ಲಬೇಕಾದ ಪ್ರೋತ್ಸಾಹದಿಂದಲೋ ವಂಚಿತರಾಗಿ,ತಮ್ಮಲಿರುವ ಜ್ಞಾನ ಹಾಗೂ ಸಾಮರ್ಥ್ಯವನ್ನು ಕಲಾಕಾಂಕ್ಷಿಗಳು ಮೂಲೆಗುಂಪಾಗಿಸುವುದು ಸರ್ವೇ ಸಾಮಾನ್ಯ.

ವೇದಿಕೆ, ಅವಕಾಶ,ಪ್ರೋತ್ಸಾಹ ಹಾಗೂ ಸಾಮರ್ಥ್ಯ ಗುರುತಿಸುವಿಕೆಯ ಅಭ್ಯಾಸವನ್ನು ಮನಗಂಡ ನಮ್ಮ ಇನ್ಸ್ ಪೈರ್ ಫಿಲ್ಮ್ ಇನ್ಸ್ಟಿಟ್ಯೂಟ್ ಸಂಸ್ಥೆಯು ಕನ್ನಡಿಗರ ಗಾನಾಭಿಷೇಕಕ್ಕ್ಕೆ ಒಂದು ವೇದಿಕೆಯನ್ನು ಕಲ್ಪಿಸಿ. ಕಲಕಾಂಕ್ಷಿಗಳ
ಸ್ವರ ಸಾಮರ್ಥ್ಯ ಹಾಗು ತಮ್ಮಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ನಿಟ್ಟಿನಲ್ಲಿ ಕರ್ನಾಟಕ ಸ್ವರ ಸುಗ್ಗಿ ಎಂಬ ವಿನೂತನ ಗಾಯನ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಇನ್ಸ್ ಪೈರ್ ಫಿಲ್ಮ್ ಇನ್ಸ್ಟಿಟ್ಯೂಟ್ ಸಂಸ್ಥೆಯು ,ಒಂದು ಚಲನಚಿತ್ರ ತರಬೇತಿ ಸಂಸ್ಥೆಯಾಗಿದ್ದರೂ ಸಹ, ಸಮಾಜಮುಖಿ ಕಾರ್ಯಕ್ರಮಗಳನ್ನುಆಯೋಜಿಸಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದೆ.ಇದಕ್ಕೆ ಪುಷ್ಟಿ ನೀಡುವಂತೆ ಕರ್ನಾಟಕ ವಿದ್ಯಾ ಸ್ಪೂರ್ಥಿ ಕಾರ್ಯಕ್ರಮವು ಒಂದು ಉತ್ತಮ ಉದಾಹರಣೆಯಾಗಿದೆ.ಪ್ರೌಢಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿ ವರೆಗಿನ ವಿದ್ಯಾರ್ಥಿಗಳ ಬರವಣಿಗೆಯ ಪ್ರೌಢಿಮೆಯನ್ನು ಪ್ರಬಂಧ ಮಂಡನೆಯಿಂದ ಗುರುತಿಸಿ,ಆಯ್ಕೆಯಾದ ಹಲವು ಅಭ್ಯರ್ಥಿಗಳಿಗೆ ಸನ್ಮಾನ,ಪಾರಿತೋಷಕ ಹಾಗು ಗೌರವ ಧನವನ್ನು ನೀಡಿ ನಮ್ಮ ಸಂಸ್ಥೆಯು ಗೌರವಿಸಿದೆ.ಅಂತೆಯೇ ಬರವಣಿಗೆಯಲ್ಲಿ ಪಾರುಪತ್ಯ ಸಾಧಿಸಿದವರಿಗೆ ಸಾಹಿತ್ಯ ಲೋಕಕ್ಕೂ ಪರಿಚಯ ಮಾಡಿಕೊಟ್ಟಿದೆ.ನಮ್ಮ ಸಂಸ್ಥೆಯ ಸಾಮಾಜಿಕ ಸೇವೆಯು ಶಿಕ್ಷಣಕ್ಕೆ ಮಾತ್ರ ಸೀಮಿತವಿರದೆ,ನಾವು ಆಯೋಜಿಸುವ ಕಾರ್ಯಕ್ರಮಗಳು ಕರುನಾಡಿನ ಪ್ರತಿಯೊಬ್ಬ ಕನ್ನಡಿಗನಿಗೂ ವೇದಿಕೆಯಾಗಲಿ ಎಂಬ ಮಹತ್ವಾಕಾಂಕ್ಷೆಯಿಂದ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ಹಾಗೂ ಅವಕಾಶಗಳನ್ನು ಮುಂಬರುವ ದಿನಗಳಲ್ಲಿ ಮುನ್ನೆಲೆಗೆ ತರುವಂತಹ ಆಶಾಭಾವನೆಯನ್ನು ಹೊಂದಿದ್ದು .ಕರ್ನಾಟಕ ಸ್ವರ ಸುಗ್ಗಿ 2023 ಎಂಬ ಕಾರ್ಯಕ್ರಮವನ್ನು ಹೆಮ್ಮೆಯಿಂದ ಆಯೋಜಿಸಿದೆ.

ಕರ್ನಾಟಕ ಸ್ವರ -ಸುಗ್ಗಿ ಕಾರ್ಯಕ್ರಮಗಳು , ಪ್ರತಿಭಾನ್ವೇಷಣೆಯ ಒಂದು ಭಾಗವೆಂದರೆ ಬಹುಷಃ ತಪ್ಪಾಗಲಾರದು ,ಜಾನಪದ ಲೋಕವನ್ನು ಆಳಿದ ಆದೆಷ್ಟೋ ಸಾಧಕರು ಸಂಗೀತವನ್ನು ಕಲಿತವರಲ್ಲ.ಪದಗಳ ಕಟ್ಟುವಿಕೆ ಹಾಗು ತಮಗರಿವಿಲ್ಲದಂತೆ ರಾಗವನ್ನು ಹೊಂದಿಸಿ ಹಾಡುತ್ತಾ, ಸಂಗೀತ ಲೋಕಕ್ಕೆ ಹೊಸ ಭಾಷ್ಯವನ್ನು ಬರೆದವರು ಇಂದಿಗೂ ನಮ್ಮ ಗ್ರಾಮೀಣ ಭಾಗದಲ್ಲಿ ಜೀವಂತ ಸಾಕ್ಷಿಯಾಗಿ ಉಳಿದಿದ್ದಾರೆ . ಸಂಗೀತವು ಪ್ರತಿಯೊಬ್ಬರಿಗೂ ಸಲ್ಲುವ ಒಂದು ಸ್ವತಂತ್ರ ಜ್ಞಾನವಾಗಿದೆ. ಗದ್ದೆಯಲ್ಲಿ ನಾಟಿ ಮಾಡುವುದರಿಂದ ಹಿಡಿದು ಕುರಿಗಾಹಿಯ ಕಾಯಕದವರೆಗೂ, ಹೃದಯದ ಬಡಿತದಿಂದ ಹಿಡಿದು ಆಳುವ ಭಾವನೆವರೆಗೂ ಪ್ರತಿಯೊಂದು ವಿಷಯದಲ್ಲೂ ಸಂಗೀತವು ಲಯದ ಮುಖವಾಡವನ್ನು ಹೊತ್ತು ಅಡಗಿ ಕುಳಿತಿದೆ . ಈ ಸೃಷ್ಟಿಯ ಅಸ್ತಿತ್ವಕ್ಕೆ ಲಯವೇ ಮೂಲಕಾರಣವಾಗಿದೆ ಎಂಬುದು ಅಕ್ಷರಶಃ ಸತ್ಯ, ಹಾಗಾಗಿ ಪ್ರತಿಯೊಬ್ಬರಲ್ಲೂ ಲಯವೆಂಬುವುದು ಜೀವಂತವಾಗಿರುವಾಗ ಸಂಗೀತದಿಂದ ಹೇಗೆತಾನೆ ವಿಮುಖರಾಗಲು ಸಾಧ್ಯ ?
ಈ ಪ್ರಶ್ನೆಗೆ ಉತ್ತರವಾಗಿ, ಕರ್ನಾಟಕ ಸ್ವರ ಸುಗ್ಗಿ ಎಂಬ ಗಾಯನ ಕಾರ್ಯಕ್ರಮವು, ಒಂದು ಸ್ಪರ್ದೆಯ ವೇದಿಕೆಯಾಗಿ ರೂಪುಗೊಂಡಿದ್ದು, ಅವಕಾಶ ವಂಚಿತರಿಗೆ ಹಾಗೂ ಕಲಾಕಾಂಕ್ಷಿಗಳಿಗೆ ತಮ್ಮನ್ನು ತಾವು ವಿಮಾರ್ಶೆಗೊಳಪಡಿಸಿಕೊಳ್ಳುವ , ಅಂತೆಯೇ ತಮ್ಮ ಮುಂದಿನ ಕಲಾಪಯಣಕ್ಕೆ ಮಾರ್ಗದರ್ಶನವನ್ನು ದಕ್ಕಿಸಿಕೊಳ್ಳುವ ಈ ವೇದಿಕೆಯು ಒಂದು ಸುವರ್ಣಾವಕಾಶವೆಂದರೆ ತಪ್ಪಾಗಲಾರದು.
ಈ ಅವಕಾಶವನ್ನು ಭಾಗವಹಿಸುವ ಪ್ರತಿಯೊಬ್ಬ ಕಲಾಕಾಂಕ್ಷಿಯು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರುತ್ತಾ, ಅಭ್ಯರ್ಥಿಗಳಿಗೆ ಶುಭಕೋರುತ್ತೇವೆ.