Karnataka Kala chatura-2024
Karnataka Kala Chatura, a state-level one-man show, is a competition platform, a golden opportunity for the underprivileged and aspirants to critique themselves, as well as get an opportunity and guidance for their future artistic journey.Those who emerge victorious in the Karnataka Kala Chatura program will be given honors and incentives by our organization, and the first place talent will be given an opportunity to act in a Kannada movie and will be introduced to the film industry.
Kala Chatura
ಕರ್ನಾಟಕ ಕಲಾ ಚತುರ-2024
ಕರ್ನಾಟಕ ಕಲಾ ಚತುರ ಕಾರ್ಯಕ್ರಮವು, ಪ್ರತಿಭಾನ್ವೇಷಣೆಯ ಒಂದು ಭಾಗವೆಂದರೆ ಬಹುಶಃ ತಪ್ಪಾಗಲಾರದು, ಬಂಗಾರದ ಪರದೆಯಾದ ರಂಗಭೂಮಿ ಲೋಕವನ್ನು ಆಳಿದ ಅದೆಷ್ಟೋ ಸಾಧಕರು ನಟನೆಯನ್ನು ಕಲಿತವರಲ್ಲ. ಬೀದಿ ನಾಟಕಗಳ ಮೂಲಕ, ಸ್ವಾತಂತ್ರ್ಯ ಸಂಗ್ರಾಮದ ಅರಿವನ್ನು ಮೂಡಿಸುತ್ತಾ, ಸಾಮಾಜಿಕ ಹಾಗೂ ಪೌರಾಣಿಕ ಕಥೆಗಳಿಂದ, ಸಮಾಜಕ್ಕೆ ಸೌಹಾರ್ದತೆ ಹಾಗೂ ಸಹಬಾಳ್ವೆ ಬಗೆಗಿನ ಉತ್ತಮ ಸಂದೇಶಗಳನ್ನು ಹಾಗೂ ಕಳಕಳಿಯನ್ನು ನೀಡುತ್ತಾ/ತೋರಿಸುತ್ತಾ ಕಲೆಯ ಮುಖೇನ ನಮ್ಮ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಬುದ್ದಿವಂತರು ಹಾಗೂ ಹೃದಯಶೀಲರು ಬಹಳಷ್ಟು ಮಂದಿ, ಇದಕ್ಕೆ ಉತ್ತಮ ಉದಾಹರಣೆಯಾಗಿ ಕನ್ನಡ ಕಲಾರತ್ನ ಡಾ|| ರಾಜ್‌ಕುಮಾರ್‌ರವರು ಇಂದಿಗೂ ಜೀವಂತ ಸಾಕ್ಷಿಯಾಗಿ ಉಳಿದಿದ್ದಾರೆ. ಕಲೆಯು ಪ್ರತಿಯೊಬ್ಬರಿಗೂ ಸಲ್ಲುವ ಒಂದು ಸ್ವತಂತ್ರ ಜ್ಞಾನವಾಗಿದೆ. ಸಮಾಜದಲ್ಲಿರುವ ಪ್ರಚಲಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದರಿಂದ ಹಿಡಿದು, ಹಿರಿಯರು ಕಿರಿಯರಿಗೆ ತಿಳಿಹೇಳುವ ಬುದ್ದಿಮಾತಿನವರೆಗೆ, ಯಾವುದು ಸರಿ ಯಾವುದು ತಪ್ಪು ಎಂದು ನಮ್ಮಲ್ಲಿರುವ ತಪ್ಪುತಿಳುವಳಿಕೆಗಳನ್ನು ಹೋಗಲಾಡಿಸುವ ಶಕ್ತಿ ಕಲೆಗಿದೆ. ನೊಂದ ಮನಸ್ಸುಗಳಿಗೆ ಸಾಂತ್ವಾನ, ಮನರಂಜನೆ, ಹಾಸ್ಯ, ಜೀವನದ ಮೌಲ್ಯ, ಸಂಬಂಧಗಳ ಪ್ರಾಮುಖ್ಯತೆಯ ಜೊತೆಗೆ ಮೂಢನಂಬಿಕೆಯನ್ನು ಹೋಗಲಾಡಿಸುವುದರಿಂದ ಹಿಡಿದು ದೇಶದ ಉನ್ನತಿಗಾಗಿ ನಡೆದುಹೋದ ಅದೆಷ್ಟೋ ಕ್ರಾಂತಿಗಳಿಗೆ ಕಲೆಯ ಕೊಡುಗೆ ಅಪಾರವಾಗಿದೆ. ಹಾಗಾಗಿ ಕಲೆಯಿಂದ ಯಾರು ತಾನೆ ವಿಮುಖರಾಗಲು ಸಾಧ್ಯ?
ಈ ಪ್ರೆಶ್ನೆಗೆ ಉತ್ತರವಾಗಿ, ಕರ್ನಾಟಕ ಕಲಾ ಚತುರ ಎಂಬ ರಾಜ್ಯ ಮಟ್ಟದ ಏಕಪಾತ್ರಾಭಿನಯ ಕಾರ್ಯಕ್ರಮವು, ಒಂದು ಸ್ಪರ್ಧೆಯ ವೇದಿಕೆಯಾಗಿ ರೂಪುಗೊಂಡಿದ್ದು, ಅವಕಾಶ ವಂಚಿತರಿಗೆ ಹಾಗೂ ಕಲಾಕಾಂಕ್ಷಿಗಳಿಗೆ ತಮ್ಮನ್ನು ತಾವು ವಿಮರ್ಷೆಗೊಳಪಡಿಸಿಕೊಳ್ಳುವ, ಅಂತೆಯೇ ತಮ್ಮ ಮುಂದಿನ ಕಲಾಪಯಣಕ್ಕೆ ಅವಕಾಶವನ್ನು ಹಾಗೂ ಮಾರ್ಗದರ್ಶನವನ್ನು ದಕ್ಕಿಸಿಕೊಳ್ಳುವ ಈ ವೇದಿಕೆಯು ಒಂದು ಸುವರ್ಣಾವಕಾಶವೆಂದರೆ ತಪ್ಪಾಗಲಾರದು. ಕರ್ನಾಟಕ ಕಲಾ ಚತುರ ಕಾರ್ಯಕ್ರಮದಲ್ಲಿ ಜಯಶಾಲಿಗಳಾಗಿ ಹೊರಹೊಮ್ಮುವವರಿಗೆ, ನಮ್ಮ ಸಂಸ್ಥೆಯಿಂದ ಸನ್ಮಾನ ಹಾಗೂ ಪ್ರೋತ್ಸಾಹ ಧನವನ್ನು ನೀಡುವುದರ ಜೊತೆಗೆ, ಪ್ರಥಮ ಸ್ಥಾನವನ್ನು ಗಳಿಸಿದ ಪ್ರತಿಭಾನ್ವಿತರಿಗೆ ಕನ್ನಡ ಸಿನಿಮಾದಲ್ಲಿ ನಟನೆಯ ಅವಕಾಶವನ್ನು ನೀಡಿ ಚಿತ್ರರಂಗಕ್ಕೆ ಪರಿಚಯಿಸಲಾಗುವುದು. ದ್ವಿತೀಯ ಸ್ಥಾನ ಗಳಿಸಿದ ಕಲಾಕಾಂಕ್ಷಿಗಳಿಗೆ ನಮ್ಮ ಸಂಸ್ಥೆಯು ನಿರ್ಮಾಣ ಮಾಡುವ ಕಿರುಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶದೊಂದಿಗೆ, ತೃತೀಯ ಸ್ಥಾನ ಗಳಿಸಿದವರಿಗೆ ಕಿರುಚಿತ್ರದಲ್ಲಿ ಅಭಿನಯಿಸುವ ಅಭೂತಪೂರ್ವ ಅವಕಾಶವನ್ನು ನಮ್ಮ ಪರಂಪರಾ ಸ್ಟುಡಿಯೋಸ್ ಸಂಸ್ಥೆ ಮಾಡಿಕೊಡಲಿದೆ. ಈ ಆಶಯ ಪತ್ರದೊಂದಿಗಿರುವ/ಕಳುಹಿಸುವ ಅಥವಾ ಕಳುಹಿಸಲಾಗಿರುವ ಕಲಾ ಚತುರ ಪ್ರವೇಶ ಪತ್ರವನ್ನು ನಮ್ಮ ಸಂಸ್ಥೆಯ ಹಾಗೂ ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಿಗೂ ಕಡ್ಡಾಯವಾಗಿ ಬಳಸಿ. ಈ ಅವಕಾಶವನ್ನು ಭಾಗವಹಿಸುವ ಪ್ರತಿಯೊಬ್ಬ ಕಲಾಕಾಂಕ್ಷಿಯು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರುತ್ತಾ, ಅಭ್ಯರ್ಥಿಗಳಿಗೆ ಶುಭಕೋರುತ್ತೇವೆ.
ವ್ಯವಸ್ಥಾಪಕ ನಿರ್ದೇಶಕರು